Objections to handing over of 46 school-based kitchens to NGO run centralized kitchens for supplying mid-day meals under Akshara Dasoha programme (11/12/2019)

Original: Kannada (See below for English translation)

ದಿನಾಂಕ:    11/12/2019

ಗೆ,

ಅಧ್ಯಕ್ಷರು,

ಬೆಂಗಳೂರು ನಗರ ಜಿಲ್ಲಾ ಪಂಚಾಯತಿ 

ಬೆಂಗಳೂರು

 

ವಿಷಯ: ಅಕ್ಷರ ದಾಸೋಹ ಕಾರ್ಯಕ್ರಮದಡಿ ಮಧ್ಯಾಹ್ನ ಬಿಸಿಯೂಟ ಪೂರೈಸಲು 46 ಶಾಲಾ ಆಧಾರಿತ ಅಡಿಗೆಮನೆಗಳನ್ನು, ಸರ್ಕಾರೇತರ ಸಂಸ್ಥೆಗಳಿಗೆ ಹಸ್ತಾಂತರಿಸಿ  ಅವುಗಳನ್ನು ಕೇಂದ್ರೀಕೃತ ಅಡಿಗೆಮನೆಗಳನ್ನಾಗಿಸುವ ಬಗ್ಗೆ ಆಕ್ಷೇಪಣೆಗಳು.

 ಮಾನ್ಯರೇ,

 ನಾವು ಕರ್ನಾಟಕದಲ್ಲಿ ಮಕ್ಕಳ ಆಹಾರದ ಹಕ್ಕಿನ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವವರಾಗಿದ್ದು, ಪೌಷ್ಠಿಕಾಂಶ ತಜ್ಞರು, ಕಾರ್ಯಕರ್ತರು, ಸಂಶೋಧಕರು, ಅನೇಕಲ್ ನಿವಾಸಿಗಳು ಮತ್ತು ಇದರ ಬಗ್ಗೆ ಕಾಳಜಿಯುಳ್ಳ ನಾಗರಿಕರನ್ನು ಒಳಗೊಂಡಿದೆ. ಅಕ್ಷರ ದಾಸೋಹ ಯೋಜನೆಯಡಿ ಅನೇಕಲ್ ತಾಲ್ಲೂಕಿನ 46 ಶಾಲಾ ಆಧಾರಿತ ಅಡಿಗೆಮನೆಗಳ ಮಧ್ಯಾಹ್ನದ ಬಿಸಿಯೂಟದ ಸರಬರಾಜನ್ನು ಎನ್‌ಜಿಒ ಅಕ್ಷಯ ಪಾತ್ರ ಫೌಂಡೇಶನ್‌ಗೆ ಹಸ್ತಾಂತರಿಸುವ ಪ್ರಸ್ತಾಪವನ್ನು ಪರಿಗಣಿಸಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಕ್ರಮವು ಈ ಶಾಲೆಗಳಲ್ಲಿನ ಮಕ್ಕಳ ಪೌಷ್ಠಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮವನ್ನು ನಿಮ್ಮ ಗಮನಕ್ಕೆ ತರಲು  ಕಾಳಜಿಯಿಂದ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇವೆ. ಈ ಪ್ರಸ್ತಾಪಕ್ಕೆ ನಮ್ಮ ವಿರೋಧವು ಈ ಕೆಳಗಿನ ವಾಸ್ತವ ಸತ್ಯಗಳನ್ನು ಆಧರಿಸಿದೆ: 

1) ಶಾಲಾ ಆಧಾರಿತ ಅಡುಗೆಮನೆಗೆ ಮಕ್ಕಳು ಆದ್ಯತೆ ನೀಡುತ್ತಾರೆ: ಜೂನ್ 2019 ರಲ್ಲಿ ನಾವು ಅನೇಕಲ್ ತಾಲ್ಲೂಕಿನ 5 ಶಾಲೆಗಳು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ 30 ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿದ್ದೆವು. ಕೇಂದ್ರೀಕೃತ ಅಡಿಗೆಮನೆಗಳ ಮೂಲಕ (ಅನುಬಂಧ 1) ಎನ್‌ಜಿಒಗಳು ಪೂರೈಸುವ ಆಹಾರಕ್ಕೆ ಹೋಲಿಸಿದರೆ ಮಕ್ಕಳು ಶಾಲಾ ಆಧಾರಿತ ಅಡಿಗೆಮನೆಗಳಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ನಾವು ಕಂಡುಕೊಂಡಿದ್ದೇವೆ. ಶಾಲೆಯಲ್ಲಿ ತಯಾರಿಸಿದ ಮತ್ತು ಬಿಸಿ ಮತ್ತು ತಾಜಾವಾಗಿ ಬಡಿಸಿದ ಆಹಾರದ ರುಚಿ ಎನ್‌ಜಿಒಗಳು ಪೂರೈಸುವ ಆಹಾರಕ್ಕಿಂತ ಉತ್ತಮವಾಗಿದೆ. ಎನ್‌ಜಿಒಗಳು ಬೆಳಿಗ್ಗೆ ಬೇಗನೆ ಆಹಾರವನ್ನು ಬೇಯಿಸಿ ವ್ಯಾನ್‌ಗಳ ಮೂಲಕ ಸಾಗಿಸುತ್ತವೆ. ಕೆಲವು ಶಾಲೆಗಳು ಊಟದ ಸಮಯಕ್ಕೆ 2-3 ಗಂಟೆಗಳ ಮೊದಲು ಆಹಾರವನ್ನು ಪಡೆಯುತ್ತವೆ. ಈ ಆಹಾರವು ಕೆಲವೊಮ್ಮೆ ತಣ್ಣಗಾಗಿರುವುದರಿಂದ  ಅಥವಾ ಕೃತಕವಾಗಿ ಬಿಸಿ ಮಾಡಿರುವುದರಿಂದ ಅದರ ರುಚಿಯನ್ನು ಕಳೆದುಕೊಂಡಿರುತ್ತದೆ. ಆಹಾರವನ್ನು ಸ್ವಯಂಚಾಲಿತ ಯಂತ್ರಗಳಲ್ಲಿ ಬೇಯಿಸುವುದರಿಂದ, ಆಹಾರದ ರುಚಿ ಸಾಮಾನ್ಯವಾಗಿ ಪ್ರತೀದಿನವು ಒಂದೇ ತರಹ ಇರುತ್ತದೆ. ಈ ಎನ್‌ಜಿಒಗಳು ಪೂರೈಸುವ ಬೇಯಿಸಿದ ಅಕ್ಕಿಯ ಗುಣಮಟ್ಟವು ಕೂಡ ತುಂಬಾ ಕಳಪೆಯಾಗಿದ್ದು, ಹೊಸದಾಗಿ ಬೇಯಿಸಿದ ಅಕ್ಕಿಯ ಗುಣಮಟ್ಟದಷ್ಟು ಉತ್ತಮವಾಗಿರುವುದಿಲ್ಲ. ಈ ಸಮಸ್ಯೆಗಳ ಪರಿಣಾಮವಾಗಿ, ಎನ್‌ಜಿಒಗಳು ಪೂರೈಸುವ ಶಾಲೆಗಳಲ್ಲಿನ ಮಕ್ಕಳು ಸಾಮಾನ್ಯ ಬೆಳವಣಿಗೆಗೆ ತಿನ್ನಬೇಕಾದ ಆಹಾರದ ಪ್ರಮಾಣವನ್ನು ಕೇವಲ 60-70% ಮಾತ್ರ ತಿನ್ನುತ್ತಿದ್ದಾರೆ. ಈ ಕಾರಣ ಕೆಲವು ಮಕ್ಕಳು ತಮ್ಮ ಮನೆಗಳಿಂದ ಟಿಫನ್ಗಳನ್ನು ತರಲು ಬಯಸುತ್ತಾರೆ. ಯಾವುದೇ ಮಕ್ಕಳು ಹಿಂತಿರುಗಿ ಆಹಾರದ ಎರಡನೆಯ ಸೇವೆಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಇದರ ಪರಿಣಾಮವಾಗಿ, ಬಹಳಷ್ಟು ಆಹಾರ ವ್ಯರ್ಥವಾಗುತ್ತಿದೆ. ಮತ್ತೊಂದೆಡೆ, ಸ್ಥಳೀಯ ಅಡಿಗೆಮನೆಗಳಿರುವ ಶಾಲೆಯಲ್ಲಿ, ಮಕ್ಕಳು ತಮಗೆ ಬೇಕಾದಷ್ಟು ತಿನ್ನುತ್ತಾರೆ ಮತ್ತು ಮೊದಲ ಸೇವೆಯ ನಂತರ ಹೆಚ್ಚಿನದನ್ನು ಕೇಳುತ್ತಾರೆ. ಈ ಶಾಲೆಗಳಲ್ಲಿ, ಶಿಕ್ಷಕರು ಸಹ ಇದೇ ಆಹಾರವನ್ನು ಸೇವಿಸುತ್ತಾರೆ ಎಂದು ನಾವು ಗಮನಿಸಿದ್ದೇವೆ, ಆದರೆ ಯಾವುದೇ ಶಿಕ್ಷಕರು ಎನ್‌ಜಿಒಗಳು ಪೂರೈಸುವ ಆಹಾರವನ್ನು ತಿನ್ನುವುದನ್ನು ನಾವು ನೋಡಲಿಲ್ಲ. ಆದ್ದರಿಂದ, ಈ ಶಾಲೆಗಳನ್ನು ಎನ್‌ಜಿಒಗಳಿಗೆ ಹಸ್ತಾಂತರಿಸುವ ಬದಲು, ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಅಡುಗೆಯವರು ಮತ್ತು ಸಹಾಯಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸಬೇಕು.

2) ಎನ್‌ಜಿಒಗಳಿಂದ ಹಾಲು ಪೂರೈಸುವಲ್ಲಿ ಸಮಸ್ಯೆಗಳು: ಅನೇಕಲ್‌ನ ಹಲವಾರು ಶಾಲೆಗಳಲ್ಲಿ, ಕ್ಷೀರ ಭಾಗ್ಯದಡಿಯಲ್ಲಿ ಬಿಸಿ ಹಾಲನ್ನು ಪೂರೈಸುವ ಬದಲು, ತಣ್ಣನೆಯ ಹಾಲನ್ನು ಪೂರೈಸಲಾಗುತ್ತಿದೆ. ವಿಶೇಷವಾಗಿ ಚಳಿಗಾಲದಲ್ಲಿ ಈ ತಣ್ಣನೆಯ ಹಾಲನ್ನು ಕುಡಿಯಲು ಮಕ್ಕಳಿಗೆ ಕಷ್ಟವಾಗುತ್ತದೆ. ಈ ಕಾರಣದಿಂದಾಗಿ, ಮಕ್ಕಳು ಕಡಿಮೆ ಪ್ರಮಾಣದ ಹಾಲು ಕುಡಿಯುತ್ತಿದ್ದಾರೆ, ಇದು ಯೋಜನೆಯ ಉದ್ದೇಶವನ್ನು ವ್ಯರ್ಥಗೊಳಿಸಿದಂತೆ ಆಗುತ್ತದೆ. ಹಲವಾರು ಶಾಲೆಗಳಲ್ಲಿ, ಪ್ರಯಾಣ ವೆಚ್ಚವನ್ನು ಉಳಿಸಲು, ಎನ್‌ಜಿಒಗಳು ಹಾಲನ್ನು ಬೆಳಿಗ್ಗೆ 9-10 ರ ನಡುವೆ ಸರಬರಾಜು ಮಾಡುವ ಬದಲು ಮಧ್ಯಾಹ್ನ 11-12ರ ಅಷ್ಟೊತ್ತಿಗೆ ಮಧ್ಯಾಹ್ನ ಬಿಸಿ ಊಟದ ಜೊತೆ  ಪೂರೈಸುತ್ತಿವೆ. ಹೀಗಾಗಿ, ಹಲವಾರು ಮಕ್ಕಳು ಊಟದ ಸಮಯದವರೆಗೆ ಹಸಿವಿನಿಂದ ಇರುತ್ತಾರೆ ಮತ್ತು ಆಹಾರದ ಜೊತೆಗೆ ಹಾಲು ಕುಡಿಯುತ್ತಾರೆ. 

3) ಅಕ್ಷಯ ಪಾತ್ರ ಫೌಂಡೇಶನ್‌ನಿಂದ ರುಚಿ ಹೆಚ್ಚಿಸುವ ಮತ್ತು ಸಾಂಪ್ರದಾಯಿಕವಾಗಿ ಬಳಸುವ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಪದಾರ್ಥಗಳ ನಿರಾಕರಣೆ: ಈ 46 ಶಾಲೆಗಳನ್ನು ಅಕ್ಷಯ ಪಾತ್ರ ಫೌಂಡೇಶನ್‌ಗೆ ಹಸ್ತಾಂತರಿಸುವ ಪ್ರಸ್ತಾಪವಿದೆ, ಅದು ಧಾರ್ಮಿಕ ನಂಬಿಕೆಗಳ ಕಾರಣದಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಬಳಸುವುದಿಲ್ಲ. ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ) ನಡೆಸಿದ ಅಧ್ಯಯನದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಆಹಾರದಿಂದ ಕಬ್ಬಿಣ ಮತ್ತು ಸತುವು ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಈ ಶಾಲೆಗಳಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳು ಬಡವರು ಮತ್ತು ಅಂಚಿನಲ್ಲಿರುವ ಸಮುದಾಯಗಳಿಂದ (ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಇತರ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು) ಬಂದಿದ್ದಾರೆ ಮತ್ತು ಅವರಲ್ಲಿ ಹಲವರು ಅಪೌಷ್ಟಿಕತೆಯಿಂದ ಕೂಡಿದ್ದಾರೆ. ಈ ಶಾಲೆಗಳನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ನೀಡಿದರೆ, ಈ ಸಮುದಾಯಗಳ ಮಕ್ಕಳಿಗೆ ಈ ರುಚಿ ಹೆಚ್ಚಿಸುವ ಪದಾರ್ಥಗಳನ್ನು ನೀವು ನಿರಾಕರಿಸುತ್ತೀರಿ. ಮಕ್ಕಳು ಈರುಳ್ಳಿ ಇಲ್ಲದೆ ಸಾಂಬಾರ ಮತ್ತು ಚಿತ್ರಾನ್ನವನ್ನು ತಿನ್ನಲು ಒತ್ತಾಯಿಸಲಾಗುವುದು, ಅದು ಖಂಡಿತವಾಗಿಯೂ ಆಹಾರದ ರುಚಿಯನ್ನು ಹದಗೆಡಿಸಿ,  ಕಡಿಮೆ ಪ್ರಮಾಣದ ಸೇವನೆಗೆ ಕಾರಣವಾಗುವುದು.

4) ಅಂಚಿನಲ್ಲಿರುವ ಸಮುದಾಯಗಳ ಮಹಿಳಾ ಕಾರ್ಮಿಕರ ಜೀವನೋಪಾಯದ ನಷ್ಟ: ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ಈ ಶಾಲೆಗಳಲ್ಲಿ ಅಡುಗೆಯವರು ಮತ್ತು ಸಹಾಯಕರ ನೇಮಕದಲ್ಲಿ ದಲಿತ ಸಮುದಾಯಗಳ ಸದಸ್ಯರಿಗೆ ಆದ್ಯತೆ ನೀಡಬೇಕಾಗಿತ್ತು. ಆದಾಗ್ಯೂ, ಈ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸಲಾಗಿಲ್ಲವಾದರೂ, ಈ ಶಾಲೆಗಳಲ್ಲಿ ಅಡುಗೆಯವರು ಮತ್ತು ಸಹಾಯಕರಾಗಿ ಕೆಲಸ ಮಾಡುವ ಹೆಚ್ಚಿನ ಅಡುಗೆಯವರು ಮತ್ತು ಸಹಾಯಕರು ಅಂಚಿನಲ್ಲಿರುವ ಸಮುದಾಯಗಳ ಮಹಿಳೆಯರು. ಈ ಅಡಿಗೆಮನೆಗಳನ್ನು ಮುಚ್ಚಿದರೆ, ಅವರಲ್ಲಿ ಹೆಚ್ಚಿನವರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ. ಹಾಗೂ ತಮ್ಮಂತೆ ಕಷ್ಟಪಟ್ಟು ಶ್ರಮಿಸುತ್ತಿರುವ ಕುಟುಂಬದ ಮಕ್ಕಳನ್ನು ಅರಿತಿರುವ ಇವರು, ಕಾಳಜಿ-ಪ್ರೀತಿಯಿಂದ ಆಹಾರ ಬೇಯಿಸಿ ಉಣಬಡಿಸುವ ಪದ್ದತಿಯನ್ನು ಕಸಿದುಕೊಂಡಂತೆ ಆಗುತ್ತದೆ.

ಆಹಾರ ಪೂರೈಕೆಯನ್ನು ಕೇಂದ್ರೀಕರಿಸುವಲ್ಲಿ ಒಳಗೊಂಡಿರುವ ಈ ಗಂಭೀರ ಸಮಸ್ಯೆಗಳನ್ನು ಗಮನಿಸಿದರೆ, ಅನೇಕಲ್‌ನ ಈ 46 ಶಾಲೆಗಳಲ್ಲಿನ ಶಾಲಾ ಆಧಾರಿತ ಅಡುಗೆಮನೆ ಮುಚ್ಚುವ ಮತ್ತು ಆಹಾರ ಸರಬರಾಜನ್ನು ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ಹಸ್ತಾಂತರಿಸುವ ಕ್ರಮವು ಈ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳ ಹಿತಾಸಕ್ತಿಗೆ ವಿರೋಧಿ ಎಂದು ಸ್ಪಷ್ಟವಾಗುತ್ತದೆ. ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಸ್ತಾವನೆಯನ್ನು ತಿರಸ್ಕರಿಸಲು ಮತ್ತು ಜಿಲ್ಲೆಯ ಶಾಲಾ ಆಧಾರಿತ ಅಡಿಗೆಮನೆಗಳನ್ನು ಬಲಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಬಲವಾಗಿ ಒತ್ತಾಯಿಸುತ್ತೇವೆ.

ವಂದನೆಗಳೊಂದಿಗೆ,

Date:   11th December 2019

To,

The President,

Bengaluru Urban Zilla Panchayath

Bengaluru

Sub: Objections to handing over of 46 school-based kitchens to NGO run centralized kitchens for supplying mid-day meals under Akshara Dasoha programme.

Dear Sir/Madam,

We are a group of nutritionists, activists, researchers, residents of Anekal and concerned citizens, who have been working on children’s right to food in Karnataka for the past several years. It has come to our attention that a proposal for handing over supply of mid-day meal under Akshara Dasoha scheme of 46 school-based kitchens in Anekal Taluka to the NGO Akshaya Patra Foundation is being considered. We are writing this letter to you with deep concern to bring to you notice the adverse impact that this move will have on the nutritional health of the children in these schools. Our opposition to the proposal is based on the following facts:-

1) School-based kitchen preferred by Children: In June 2019, we had visited over 30 schools across various districts in Karnataka including 5 schools in Anekal Taluka, where we found that children overwhelmingly preferred the food cooked in school-based kitchens as compared to food supplied by NGOs through centralized kitchens (Annexure 1). The taste of food prepared at the school and served hot and fresh was much better than the food supplied by NGOs. NGOs cook the food very early in the morning and transport them through vans. Some schools receive food 2-3 hours before lunch time. The food sometimes gets cold or is kept artificially hot and thus loses its taste. Because the food is cooked in automated machines, the taste of the food is often bland and monotonous. The quality of the cooked rice supplied by these NGOs is extremely poor while that of freshly cooked rice is far superior. As a result of these issues, children in schools supplied by NGOs are eating only 60-70% of the quantity of food which they are supposed to eat for normal growth. Some children prefer to bring lunch boxes from their homes. Hardly any children go back and take second serving of the food and as a result, lot of food is being wasted. On the other hand, in school with local kitchens, children eat as much as they want till they feel full and often ask for more after the first serving. We observed that in these schools, teachers also eat the food while we didn’t come across teachers eating the food supplied by NGOs. Hence, instead of handing these schools to NGOs, the government should try to find solutions to the problems faced by principals, teachers, cooks and helpers in implementing the scheme.

2) Problems with Milk being supplied by NGOs: In several schools in Anekal, instead of hot milk being supplied under Ksheera Bhagya, cold milk is being supplied, which children find difficult to drink especially during the winters. Because of this, children are drinking less quantity of milk, which is defeating the purpose of the scheme. In several schools, to save on multiple trips, the NGOs delay the supply of milk  till 11-12 pm, instead of supplying the milk in the morning between 9-10 am. Thus, several children stay hungry till lunchtime and drink milk along with food.

3) Denial of taste-enhancing and traditionally used ingredients like onion and garlic by Akshaya Patra: The proposal plans to hand over these 46 schools to Akshaya Patra Foundation, which doesn’t use onion and garlic in its food because of its religious beliefs. As per studies by Central Food Technological Research Institute in Mysuru, onion and garlic increase absorption of iron and zinc from food.. Most of the children studying in these schools come from marginalized communities (SC, ST, OBC and minorities) and several of them are also malnourished. If these schools are given to Akshaya Patra Foundation, you will be denying these taste-enhancing ingredients to the children from these communities. Children would be forced to eat sambhar and chitranna without onions which would definitely reduce the taste component of the food leading to lesser quantity of consumption.

4) Loss of livelihoods of women workers from marginalized communities: As per directions from Supreme Court, member from Dalit communities were to be given preference in appointment of cooks and helpers in these schools. Although, this direction has not been adhered to completely, even then, most of the cooks and helpers employed in these schools, are women from marginalized communities, and if these kitchens are closed down, a majority of them would lose their livelihood.

Given these serious issues involved in centralizing the food supply, it is clear that the move to close down school-based kitchen in these 46 schools in Anekal and handing over the food supply to Akshaya Patra Foundation would be inimical to the interest of the children studying in these schools. Keeping the interest of the children in mind, we strongly urge you to reject the proposal and take urgent steps to strengthen school-based kitchens in the district.

Sincerely,

  1. Right to Food Campaign-Karnataka,
  2. Slum Jagatthu, Karnataka
  3. Tamilnadu Organic Farmers’ Federation, Erode
  4. Darbar Sahitya Sansad, Odisha
  5. Focus on the Global South, India.
  6. The Sahayak Trust
  7. Dr. Veena Shatrugna, Deputy Director (retd.), National Institute of Nutrition
  8. Deepak Malghan, Indian Institute of Management Bangalore
  9. Avani Choksi, All India People’s Forum
  10. Dr. Sylvia Karpagam, Public health doctor and researcher
  11. Siddharth Joshi, Independent Researcher, Bengaluru
  12. Dr. Alwyn Prakash D’Souza, Indian Social Institute, Bengaluru
  13. Nidhin, Software Employee, Bangalore
  14. Venkat Srinivasan, Concerned citizen, Bangalore
  15. Rosamma Thomas, Freelance Journalist
  16. Soumik Banerjee, Independent Researcher
  17. Dr. Joseph Xavier, Indian Social Institute, Bangalore
  18.  Prof. G. Devegowda, Emeritus Professor, University of Agricultural Sciences, GKVK, Bangalore.
  19. Teena Xavier, Gulbarga
  20. Prof.Mohan Rao, independent researcher in Bangalore
  21. Fr. Cedric Prakash SJ, Human Rights Activist
  22. Sr. Celia, Director, Janapriya Seva Kendra, Challakere
  23. Sumithra S, Indian Institute of Science
  24. R Ravishankar, Concerned citizen
  25. Aravind S, Indian Institute of Science
  26. Titus P, Indian Institute of Science
  27.  Vivek Jadhav, Indian Institutes of Science Education and Research
  28.  Ananya Kumar, University of Hyderabad
  29. Priya Iyer, Indian Institute of Science
  30.  Abhishodh Prakash, International Centre for Theoretical Sciences
  31. P Keerthipriya, Jawaharlal Nehru Centre for Advanced Scientific Research
  32. Bharat Iyer, Indian Institutes of Science Education and Research
  33. Anuj Menon, Jawaharlal Nehru Centre for Advanced Scientific Research
  34. Revathe Thillaikumar, Jawaharlal Nehru Centre for Advanced Scientific Research
  35. Anna George, National Institute of Advanced Studies
  36. Pavithra S, Concerned citizen
  37. Dr. Vidyadhar A, Researcher, Bangalore
  38. Kavitha Srinivasan, MAKAAM, Karnataka
  39. Vinay Kooragalaya Sreenivasa, Advocate
  40. Advocate Shivamanithan, Bengaluru
  41. Swarna Bhat, GRAKOOS
  42. Naveen Purushothaman, Bengaluru
  43. R. Kaleemullah, Activist, Swaraj Abhiyan, Bangalore
  44. Dr. Akhila Vasan, Karnataka Janaarogya Chaulvali
  45. Vijeta Kumar, AIDMAM (All India Dalit Adhikar Manch)
  46. C Neelaiah, Right to Food Campaign-Karnataka
  47. Gowri, Karnataka Janashakti, Bengaluru
  48. Namita Aavriti, Association for Progressive Communication, Bengaluru
  49. Parijaata, Stree Jagruti Samithi, Anekal, Bengaluru
  50. Adv Basawa, Alternative Law Forum, Bengaluru
  51. P Mohanraju, Dalit Sangharsh Samithi (Ambedkarvaada)
  52. Nandan Saxena, Documentary Film-maker and Activist
  53. Kavita Bahl, Documentary Flim-maker and Activist
  54. Shashi Rekha, Bengaluru
  55. Ravi T, Disability Rights Activist, Bengaluru
  56. Jaya Iyer, Khadya Nyaya Abhiyan (Khana), Delhi
  57. YJ Rajendra, People’s Union for Civil Liberties-Karnataka

Cc: 

  1. Vice-President, Bengaluru Urban Zilla Panchayath
  2. Chief Executive Officer, Bengaluru Urban Zilla Panchayath
  3. Education Officer, Akshara Dasoha, Bengaluru Urban Zilla Panchayath

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s